Tuesday, February 10, 2009

ಚಿತ್ರಾನ್ನ..ಚಿತ್ರಾನ್ನ...

ಮೊದಲು ಎಷ್ಟು ಬೇಕೊ ಅಷ್ಟು ಅನ್ನ ಮಾಡಿಕೊಂಡಿರಬೇಕು. ಅದಕ್ಕೆ ಉಪ್ಪು ಮತ್ತು ಅರಸಿನ ಪುಡಿಯನ್ನು ಸೇರಿಸಿಯೇ ಬೇಯಿಸಿದರೆ ಮತ್ತೆ ಸೇರಿಸುವ ಅಗತ್ಯವಿಲ್ಲ. ಅನಂತರ, ಬಾಣಲೆಗೆ ಎರಡು ಮೂರು ಚಮಚ ಎಣ್ಣೆಯನ್ನು ಹಾಕಿ, ಮೊದಲಿಗೆ ಶೇಂಗಾ ಬೀಜವನ್ನು ಫ್ರೈ ಮಾಡಿ, ಅನಂತರ ಬೆಳ್ಳುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ, ಮತ್ತೆ ಈರುಳ್ಳಿ ಸೇರಿಸಿ ಫ್ರೈ ಮಾಡಿ. ಈಗ ಸಾಸಿವೆ, ಜೀರಿಗೆ ಮತ್ತು ಬೇವಿನ ಸೊಪ್ಪು ಸೇರಿಸಿರಿ. ಟೊಮೇಟೊ, ಹಸಿಮೆಣಸು, ಉಪ್ಪು, ಅರಸಿನ ಪುಡಿ, ಸ್ವಲ್ಪ ಸಕ್ಕರೆ ಹಾಕಿ ಇನ್ನು ಸ್ವಲ್ಪ ಹೊತ್ತು ಫ್ರೈ ಮಾಡಿ. ಇದಕ್ಕೆ ಬೇಯಿಸಿಟ್ಟ ಅನ್ನ ಹಾಕಿ ಕಲಸಿ, ಚೆನ್ನಾಗಿ ಮಿಕ್ಸ್ ಮಾಡಿ, ಕೊನೆಗೆ ಸ್ವಲ್ಪ ನಿಂಬೆ ರಸ ಹಿಂಡಿರಿ, ನಿಮ್ಮ ಚಿತ್ರಾನ್ನ ಅಥವ ಲೆಮನ್ ರೈಸ್ ರೆಡಿ.

5 comments:

  1. I believe that bevina soppu should be Karibevina soppu :-)

    ReplyDelete
  2. This comment has been removed by the author.

    ReplyDelete
  3. ನಾನು ಅಡುಗೆ ಕಲಿಯುತ್ತಿರುವವರಲ್ಲಿ ಹೊಸಬ, ಚಿತ್ರಾನ್ನದ ಬಗ್ಗೆ ಹುಡುಕುತ್ತಾ ನಿಮ್ಮ ಬ್ಲಾಗ್ ಗೆ ಬಂದು ತಲುಪಿದೆ. ನಿಮ್ಮ ಬ್ಲಾಗ್ ಸಹಾಯದಿಂದ ಚೆಂದದ ಚಿತ್ರಾನ್ನವೂ ಆಯಿತು ಇವತ್ತು. ಧನ್ಯವಾದಗಳು.

    --
    ಅರವಿಂದ
    http://aravindavk.in

    ReplyDelete
  4. namma maneli bevin soppu ilvalla

    ReplyDelete