Tuesday, February 10, 2009

ಚಿತ್ರಾನ್ನ..ಚಿತ್ರಾನ್ನ...

ಮೊದಲು ಎಷ್ಟು ಬೇಕೊ ಅಷ್ಟು ಅನ್ನ ಮಾಡಿಕೊಂಡಿರಬೇಕು. ಅದಕ್ಕೆ ಉಪ್ಪು ಮತ್ತು ಅರಸಿನ ಪುಡಿಯನ್ನು ಸೇರಿಸಿಯೇ ಬೇಯಿಸಿದರೆ ಮತ್ತೆ ಸೇರಿಸುವ ಅಗತ್ಯವಿಲ್ಲ. ಅನಂತರ, ಬಾಣಲೆಗೆ ಎರಡು ಮೂರು ಚಮಚ ಎಣ್ಣೆಯನ್ನು ಹಾಕಿ, ಮೊದಲಿಗೆ ಶೇಂಗಾ ಬೀಜವನ್ನು ಫ್ರೈ ಮಾಡಿ, ಅನಂತರ ಬೆಳ್ಳುಳ್ಳಿ ಹಾಕಿ ಸ್ವಲ್ಪ ಫ್ರೈ ಮಾಡಿ, ಮತ್ತೆ ಈರುಳ್ಳಿ ಸೇರಿಸಿ ಫ್ರೈ ಮಾಡಿ. ಈಗ ಸಾಸಿವೆ, ಜೀರಿಗೆ ಮತ್ತು ಬೇವಿನ ಸೊಪ್ಪು ಸೇರಿಸಿರಿ. ಟೊಮೇಟೊ, ಹಸಿಮೆಣಸು, ಉಪ್ಪು, ಅರಸಿನ ಪುಡಿ, ಸ್ವಲ್ಪ ಸಕ್ಕರೆ ಹಾಕಿ ಇನ್ನು ಸ್ವಲ್ಪ ಹೊತ್ತು ಫ್ರೈ ಮಾಡಿ. ಇದಕ್ಕೆ ಬೇಯಿಸಿಟ್ಟ ಅನ್ನ ಹಾಕಿ ಕಲಸಿ, ಚೆನ್ನಾಗಿ ಮಿಕ್ಸ್ ಮಾಡಿ, ಕೊನೆಗೆ ಸ್ವಲ್ಪ ನಿಂಬೆ ರಸ ಹಿಂಡಿರಿ, ನಿಮ್ಮ ಚಿತ್ರಾನ್ನ ಅಥವ ಲೆಮನ್ ರೈಸ್ ರೆಡಿ.

Friday, February 6, 2009

ಮೊಳಕೆ ಬ೦ದ ಹೆಸರುಕಾಳಿನ ರೊಟ್ಟಿ

ಮೊಳಕೆ ಬ೦ದ ಹೆಸರುಕಾಳು,ಶು೦ಠಿ ಮತ್ತು ಸ್ವಲ್ಪ ನೀರು ಹಾಕಿಕೊ೦ಡು ರುಬ್ಬಿಕೊಳ್ಳಬೇಕು.ಅನ೦ತರ ಅದಕ್ಕೆ ಬೇಯಿಸಿದ ಆಲೂಗಡ್ಡೆ,ಸಣ್ಣಗೆ ಹೆಚ್ಚಿದ ಈರುಳ್ಳಿ,ಹಸಿಮೆಣಸು,ಜೀರಿಗೆ ಮತ್ತು ಕೊತ್ತ೦ಬರಿ ಸೊಪ್ಪು,ಉಪ್ಪು ಹಾಕಿ ಚೆನ್ನಾಗಿ ಕಲಸಿ ಕೊ೦ಡು ತವದ ಮೇಲೆ ತುಪ್ಪ ಹಾಕಿ ರೊಟ್ಟಿಯನ್ನು ತಟ್ಟಬೇಕು.ಇದನ್ನು ಚೆನ್ನಾಗಿ ಬೇಯಿಸಬೇಕು.ಈಗ ಮೊಳಕೆ ಬ೦ದ ಹೆಸರುಕಾಳಿನ ರೊಟ್ಟಿ ಸವಿಯಲು ಸಿದ್ದ. ಇದು ಆರೋಗ್ಯಕ್ಕೆ ತುಂಬಾ ಒಳ್ಳಯದು ಹಾಗು ಮಾಡಲು ಸಹ ತುಂಬ ಸುಲಭ...

Tuesday, January 13, 2009

ಮೊಳಕೆ ಬಂದ ಹೆಸರುಕಾಳು ಪಲಾವ್

2 ದಿನ ಹಿಂದೆ ನೆನಸಿದ ಹೆಸರುಕಾಳನ್ನು ಹಿಂದಿನ ದಿನ ಬೆಳ್ಳಿಗ್ಗೆ ನೀರಿನಿಂದ ತೆಗೆದು ಇಡಬೇಕು. ನಂತರ ಮೊದಲಿಗೆ 2-3 ಚಮಚ ಎಣ್ಣೆಯನ್ನು ಕುಕ್ಕರಿಗೆ ಹಾಕಿ, ಅದಕ್ಕೆ ಲವಂಗ, ಚಕ್ಕೆ, ಕಾಳುಮೆಣಸು (ಕರಿ ಮೆಣಸು) ಜಿರಿಗೆ ಮತ್ತು ಪಲಾವ್ ಎಲೆ (bay leaves), ಈರುಳ್ಳಿ ಹಾಕಿ ಫ್ರೈ ಮಾಡಿ. ಅನಂತರ ಬೆಳ್ಳುಳ್ಳಿ ಮತ್ತು ಶುಂಠಿ ಪೆಸ್ಟನ್ನು ಹಾಕಿ ಫ್ರೈ ಮಾಡಬೇಕು. ಮೊಳಕೆ ಬಂದ ಹೆಸರು ಕಾಳು, ಬಟಾಣಿ, ಚಿಕ್ಕದಾಗಿ ಕತ್ತರಿಸಿದ ಹಸಿ ಮೆಣಸು, ಸ್ವಲ್ಪ ಉಪ್ಪನ್ನು ಹಾಕಿ ಫ್ರೈ ಮಾಡಿ ಅದಕ್ಕೆ ಅಕ್ಕಿಯನ್ನು ಹಾಕಿ, ಅನಂತರ ಅಳತೆಗೆ ತಕ್ಕಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕೊನೆಯಲ್ಲಿ ಕುತ್ತುಂಬರಿ ಸೊಪ್ಪನ್ನು ಹಾಕಿ, ೩ ಸೀಟಿ ಬರುವಷ್ಟು ಬೇಯಿಸಿ. ನಿಮ್ಮ ಪಲಾವ್ ಸವಿಯಲು ಸಿದ್ದ. ಇದು ಮೊಳಕೆ ಬಂದ ಕಾಳಿನಿಂದ ಮಾಡಿದ್ದರಿಂದ ಇದು ಆರೊಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ರಾಯಿತದ ಜೊತೆಗೆ ತಿನ್ನಲು ಚೆನ್ನಾಗಿರುತ್ತದೆ.